ಬೆಂಗಳೂರು: ಹಣದ ಆಮಿಷವೊಡ್ಡಿ ಬಿಜೆಪಿಗರು ತನ್ನ ಪತ್ನಿಗೆ ಕರೆ ಮಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ನಕಲಿಯಾಗಿದ್ದು, ಆ ಆಡಿಯೋದಲ್ಲಿನ ಮಹಿಳೆಯ ಧ್ವನಿ ನನ್ನ ಪತ್ನಿಯದ್ದಲ್ಲ ಎಂದು ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.
ಫೇಸ್ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ‘ಬಿಜೆಪಿಗರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಲು ಕೆಲವರು ಫೇಕ್ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಅಂತಹ ಯಾವುದೇ ಕರೆ ಬಿಜೆಪಿಗರಿಂದ ನನ್ನ ಪತ್ನಿಗೆ ಬಂದಿಲ್ಲ. ನಕಲಿ ಆಡಿಯೋ ಪಸರಿಸಿದವರಿಗೆ ಕಾನೂನು ಶಿಕ್ಷೆಯಾಗಬೇಕಿದೆ’ ಎಂದಿದ್ದಾರೆ.
ವಿಶ್ವಾಸಮತಯಾಚನೆಗೂ ಮುನ್ನ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿಗರು ಕುತಂತ್ರ ಮಾಡುತ್ತಿದ್ದಾರೆ, ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸರಣಿಯಂತೆ ಆಡಿಯೋ ಕ್ಲಿಪ್ ಬಿಡುಗಡೆಗೊಳಿಸಿತ್ತು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಇದು ನಕಲಿ ಎಂದು ಆರೋಪಿಸಿದೆ. ಹೆಬ್ಬಾರ್ ಅವರ ಸ್ಪಷ್ಟನೆ ಕಾಂಗ್ರೆಸ್ಗೆ ಮುಖಭಂಗವನ್ನುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.