ನವದೆಹಲಿ: ಅತೀ ಅಗ್ಗದ ಸೈಕಲ್ನ್ನು ಶೀಘ್ರದಲ್ಲೇ ಹೊರ ತರುವುದಾಗಿ ಸೈಕಲ್ ತಯಾರಕ ಸಂಸ್ಥೆ ಹೀರೋ ಸೈಕಲ್ ಘೋಷಣೆ ಮಾಡಿದ್ದು, ಈ ಸೈಕಲ್ನ ಬೆಲೆ ರೂ.1999 ಆಗಿರಲಿದೆ.
‘ಬ್ಲಾಕ್ ಸೈಕಲ್’ ಎಂದು ಇದು ಜನಪ್ರಿಯವಾಗಿದ್ದು, ಹೀರೋದ ಮಾಂಚೆಸ್ಟರ್ ಮೂಲದ ಗ್ಲೋಬಲ್ ಡಿಸೈನ್ ಸೆಂಟರ್ ಇದನ್ನು ನಿತ್ಯದ ಬಳಕೆದಾರರಿಗಾಗಿ ವಿನ್ಯಾಸ ಪಡಿಸಿದೆ. ಕೆಲಸಕ್ಕೆ ಹೋಗಲು, ಆಸ್ಪತ್ರೆ, ಸ್ಕೂಲ್ಗೆ ತೆರಳಲು ಸೈಕಲ್ ಬಳಸುವವರಿಗೆ ಇದು ಸಹಕಾರಿಯಾಗಿದೆ. ಇದಕ್ಕೆ ‘ಅಪ್ಗ್ರೇಡ್ ರೋಡ್ಸ್ಟರ್ ಮಾಡೆಲ್’ ಎಂದು ಮರುನಾಮಕರಣ ಮಾಡಲಾಗಿದೆ.
ರೂ.500ಕ್ಕೆ ಸೈಕಲ್ ಹೊರತರುವುದಾಗಿ ಹೀರೋ ಎಂಡಿ ಪಂಕಜ್ ಮುಂಜಲ್ ಘೋಷಣೆ ಮಾಡಿದ್ದರು, ಆದರೆ ಇದರಿಂದ ಸಣ್ಣ ಕೈಗಾರಿಕೆಗಳು ಅವನತಿಗೆ ತಲುಪಬಹುದು ಎಂಬ ಕೂಗು ಎದ್ದ ಹಿನ್ನಲೆಯಲ್ಲಿ ಆ ಯೋಜನೆಯನ್ನು ಕೈಬಿಟ್ಟಿದ್ದಾರೆ.
ರೂ.1999ರ ಹೊಸ ರೋಡ್ಸ್ಟರ್ ಹಳೆ ಮಾದರಿಯ ಹೊಸ ರೂಪವಾಗಿದೆಯಾದರೂ ಸಂಪೂರ್ಣ ನೂತನ ಉತ್ಪನ್ನ ಎಂದು ಪಂಕಜ್ ಹೇಳಿದ್ದಾರೆ. ಜೂನ್ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.