ನವದೆಹಲಿ: ನೌಕಾ ಸೇನೆಯ ಮಹಿಳಾ ಸಿಬ್ಬಂದಿಯ ತಂಡವನ್ನು ಹೊತ್ತು ವಿಶ್ವಪರ್ಯಟನೆ ನಡೆಸಿದ್ದ ಐಎನ್ಎಸ್ ತಾರಿಣಿ ಭಾರತಕ್ಕೆ ವಾಪಾಸ್ಸಾಗುತ್ತಿದೆ. ಗೋವಾದ ವರೆಮ್ನಲ್ಲಿ ಮೇ.21ರಂದು ಈ ಹಡಗಿನ ಪಯಣ ಸಮಾಪಣೆಗೊಳ್ಳಲಿದೆ.
ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ, ಐಶ್ವರ್ಯ ಬೊಡ್ಡಾಪತಿ, ಪ್ರತಿಭಾ ಜಮ್ವಾಲ್, ಪಾಯಲ್ ಗುಪ್ತಾ, ವಿಜಯ್ ದೇವಿ, ಪಾತರಪಲ್ಲಿ ಸ್ವಾತಿ ಅವರ ತಂಡ ಐಎನ್ಎಸ್ ತಾರಿಣಿಯಲ್ಲಿ ವಿಶ್ವ ಪರ್ಯಟನೆ ನಡೆಸಿದ್ದು, ಇದೀಗ ಭಾರತಕ್ಕೆ ಮರಳುತ್ತಿದೆ.
ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ಈ ‘ನಾವಿಕ ಸಾಗರ ಪರಿಕ್ರಮ’ವನ್ನು ಆಯೋಜಿಸಲಾಗಿದೆ. ಕಳೆದ ಸೆ.10ರಂದು ಈ ತಂಡ ನೌಕಾಯಾನ ಆರಂಭಿಸಿತ್ತು. ಮೇ.21ರಂದು ಗೋವಾದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ಸಮಾಪಣಗೊಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.