ಜೈಪುರ: ಕೃಷಿ ಮತ್ತು ಪಶುಸಂಗೋಪಣಾ ಇಲಾಖೆಗೆ ಸುಮಾರು 600 ಪಶುವೈದ್ಯರು, 2200 ಜಾನುವಾರು ಸಹಾಯಕರು ಸೇರಿದಂತೆ ಸುಮಾರು 5,600 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ.
ಈ ಮೂಲಕ ಮುಖ್ಯಮಂತ್ರಿಗಳ ಉಚಿತ ಔಷಧ ಯೋಜನೆಯ ಉಪಯೋಗವನ್ನು ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಂತೆ ನೋಡಿಕೊಳ್ಳಲಾಗಿದೆ.
ಪಶುವೈದ್ಯರ, ಜಾನುವಾರು ಸಹಾಯಕರ ಕೊರೆತೆಯಿಂದಾಗಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಸರ್ಕಾರ ಶೀಘ್ರದಲ್ಲೇ ಈ ಸಿಬ್ಬಂದಿಗಳನ್ನು ನೇಮಕಗೊಳಿಸಲು ಕ್ರಮಕೈಗೊಂಡಿದೆ.
ಸಿಬ್ಬಂದಿಗಳ ನೇಮಕದ ಬಳಿಕ ಜಾನುವಾರಗಳು ಕೃತಕ ಗರ್ಭಧಾರಣೆ, ವಾಕ್ಸಿನೇಷನ್, ಉಚಿತ ಔಷಧ ವಿತರಣಾ ಕಾರ್ಯಗಳು ಮುಂದುವರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.