ಬೆಂಗಳೂರು: ಭಾರತೀಯ ವಾಯುಪಡೆಗೆ ಹೆಚ್ಚುವರಿಯಾಗಿ 40 ಸುಖೋಯ್ ಸು 30 ಎಂಕೆಐ ಫೈಟರ್ ಜೆಟ್ಗಳನ್ನು ಪೂರೈಕೆ ಮಾಡಲು ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಸಿದ್ಧವಾಗಿದೆ.
ರಷ್ಯಾದ ಸುಖೋಯ್ನ ಪರವಾನಗಿಯಡಿಯಲ್ಲಿ ಎಚ್ಎಎಲ್ ಸು-30ಎಂಕೆಐನ್ನು ನಿರ್ಮಾಣ ಮಾಡುತ್ತಿದ್ದು, ಕೊನೆ ಹಂತದ ಫೈಟರ್ಗಳನ್ನು ವಾಯುಪಡೆಗೆ ಪೂರೈಕೆ ಮಾಡುವ ಹಂತದಲ್ಲಿದೆ. ಅಲ್ಲದೇ ಈ ಏವಿಯೇಶನ್ ಕಂಪನಿ 40 ಹೆಚ್ಚುವರಿ ಸು-30ಎಂಕೆಐಗಳನ್ನು ವಾಯಪಡೆಗೆ ನೀಡಲು ಯೋಜನೆ ಹಾಕಿದ್ದು, ಇದಕ್ಕಾಗಿ ರಕ್ಷಣಾ ಸಚಿವಾಲಯದ ಮುಂದೆ ಪ್ರಸ್ತಾವಣೆ ಇಡಲಿದೆ.
ಮೂಲಗಳ ಪ್ರಕಾರ ಎಚ್ಎಎಲ್ ಮುಖ್ಯಸ್ಥ ಟಿ.ಸುವರ್ಣ ರಾಜು ಅವರು ತಲಾ ರೂ.425 ಕೋಟಿಗೆ 40 ಸು-30ಎಂಕೆಐಗಳನ್ನು ವಾಯಪಡೆಗೆ ಆಫರ್ ಮಾಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.