ಡೆಹ್ರಾಡೂನ್: ಉತ್ತರಾಖಂಡ ಸರ್ಕಾರ ಸಂಪುಟ ಸಭೆಯನ್ನು ತೆಹ್ರಿ ಸರೋವರದಲ್ಲಿ ತೇಲುವ ದೋಣಿಯಲ್ಲಿ ನಡೆಸುವ ಮೂಲಕ ಎಲ್ಲರ ಗಮನಸೆಳೆದಿದೆ.
ಈ ಮೂಲಕ ಉತ್ತರಾಖಂಡ ಪ್ರವಾಸೋದ್ಯಮ ರಾಜ್ಯವಾಗಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪ್ರವಾಸೋದ್ಯಮದ ಸಹಾಯದೊಂದಿಗೆ ನೂರಾರು ಯುವಕರಿಗೆ ಉದ್ಯೋಗವಕಾಶ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ನಿರ್ಧಾರವನ್ನು ಈ ತೇಲುವ ದೋಣಿಯ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಪ್ರವಾಸೋದ್ಯಮಕ್ಕೆ ಕೈಗಾರಿಕ ಸ್ಥಾನಮಾನವನ್ನು ನೀಡುವ ಸಲುವಾಗಿ, ಎಂಎಸ್ಎಂಇ( ಮೈಕ್ರೋ, ಸ್ಮಾಲ್, ಮೀಡಿಯಂ, ಎಂಟರ್ಪ್ರೈಸ್) ನಿಯಮವನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ.
ಬೇಕರಿ, ಲಾಂಡ್ರಿ, ಹಕ್ಕಿ ವೀಕ್ಷಣೆ, ತೇಲುವ ಹೋಟೆಲ್, ಟೆರೈನ್ ಬೈಕಿಂಗ್, ಕರವನ್, ಏಂಜಲಿಂಗ್, ಸ್ಟಾರ್ ಗಾಝಿಂಗ್ ಮುಂತಾದ ವಲಯಗಳಲ್ಲಿ ಯುವಕರಿಗೆ ಉದ್ಯೋಗವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.