ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರು ನೇಪಾಳದಲ್ಲಿ ಶುಕ್ರವಾರ ಚಾಲನೆ ನೀಡಿದ್ದ ಜನಕಪುರ-ಅಯೋಧ್ಯಾ ಬಸ್ನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶನಿವಾರ ಬರಮಾಡಿಕೊಂಡರು.
ಶನಿವಾರ ಅಯೋಧ್ಯಾಗೆ ಬಸ್ ಬಂದು ತಲುಪಿತ್ತು, ಯೋಗಿ ಇದನ್ನು ಸ್ವಾಗತಿಸಿದರು.
ಭಾರತ-ನೇಪಾಳ ಸ್ನೇಹದ ಬಸ್ ಎಂದೇ ಕರೆಯಲ್ಪಡುವ ಈ ಬಸ್ ಸೀತೆ ಜನ್ಮಸ್ಥಳ ಜನಕಪುರದಿಂದ ರಾಮನ ಜನ್ಮಸ್ಥಳ ಅಯೋಧ್ಯಾಗೆ ಸಂಪರ್ಕ ಕಲ್ಪಿಸುತ್ತದೆ. ತನ್ನ ಮೊದಲ ಪ್ರಯಾಣವನ್ನು ಪೂರ್ಣಗೊಳಿಸಿರುವ ಈ ಬಸ್ ಅಯೋಧ್ಯಾಗೆ ಬಂದು ತಲುಪಿದೆ.
ಈ ಬಸ್ನಿಂದಾಗಿ ಉಭಯ ದೇಶಗಳ ನಡುವಣ ಪ್ರವಾಸೋದ್ಯಮ ಸಂಬಂಧ ವೃದ್ಧಿಯಾಗುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.