ಲಕ್ನೋ: ಲಕ್ನೋ ವೈದ್ಯರೊಬ್ಬರು ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ವೀರ ಯೋಧರ ಋಣ ಸಂದಾಯ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ, ಯೋಧರ ಕುಟುಂಬ ಸದಸ್ಯರಿಗೆ ಇವರು ಉಚಿತವಾಗಿ ಚಿಕಿತ್ಸೆ, ಔಷಧಿಗಳನ್ನು ನೀಡುತ್ತಿದ್ದಾರೆ.
ಡಾ. ಅಜಯ್ ಚೌಧರಿ ಅವರ ಗೋಮತಿ ನಗರದಲ್ಲಿನ ಕ್ಲಿನಿಕ್ನಲ್ಲಿ ಯೋಧರ ಕುಟುಂಬ ಸದಸ್ಯರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ದೊರಕುತ್ತಿದೆ.
‘ದೇಶಕ್ಕಾಗಿ ಯೋಧರು ನೀಡುತ್ತಿರುವ ನಿಸ್ವಾರ್ಥ ಸೇವೆಗೆ ಪ್ರತಿಯಾಗಿ ನಾನು ಈ ಕಾರ್ಯವನ್ನು ಸ್ವಯಂಪ್ರೇರಣೆಯಿಂದ ಮಾಡುತ್ತಿದ್ದೇನೆ’ ಎಂದು ಅಜಯ್ ಹೇಳುತ್ತಾರೆ.
ಅವರ ಕ್ಲಿನಿಕ್ ಮುಂದೆ, ‘ಯೋಧರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ, ನೀವು ಈಗಾಗಲೇ ಗಡಿಯಲ್ಲಿ ಶುಲ್ಕ ಪಾವತಿ ಮಾಡಿದ್ದಿರ’ ಎಂದು ಬೋರ್ಡ್ ಹಾಕಿದ್ದಾರೆ. ಐಡಿಯೊಂದಿಗೆ ಬರುವ ಯೋಧರಿಗೆ, ಯೋಧರ ಸಂಬಂಧಿಗಳಿಗೆ ಇಲ್ಲಿ ಚಿಕಿತ್ಸೆ ಉಚಿತ.
ಅಜಯ್ ಅವರೂ ಸೇನಾ ಕುಟುಂಬದಿಂದ ಬಂದಿದ್ದಾರೆ, ಸೈನಿಕನಾಗಲು ಅವರೂ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ, ಅದಕ್ಕಾಗಿ ಈ ರೀತಿ ಸೈನಿಕರ ಋಣ ಸಂದಾಯ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.