ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರ್ನಾಟಕ ಬಿಜೆಪಿಯ ಎಸ್ಸಿ/ಎಸ್ಟಿ/ಒಬಿಸಿ ಮತ್ತು ಸ್ಲಂ ಮೋರ್ಚಾದೊಂದಿಗೆ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ಸಂವಾದವನ್ನು ನಡೆಸಿದರು.
‘ದಲಿತರ ಉದ್ಧಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, ದಲಿತ ಸಮುದಾಯದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸಿದ್ದೇವೆ, ಈ ಮೂಲಕ ಆ ಸಮಾಜಕ್ಕೆ ದೊರಕಬೇಕಾದ ಗೌರವವನ್ನು ನೀಡಿದ್ದೇವೆ’ ಎಂದರು.
‘ಕಾಂಗ್ರೆಸ್ ದಲಿತ ವಿರೋಧಿಯಾಗಿದೆ, ಹಿಂದುಳಿದ ಸಮುದಾಯದ ನಿಗಮ ಸ್ಥಾಪನೆಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಒಬಿಸಿ ಜನಾಂಗದ ನಿಗಮಕ್ಕೆ ಸಲ್ಲಬೇಕಾದ ಸಂವಿಧಾನಬದ್ಧ ಮಾನ್ಯತೆಯನ್ನು ನೀಡಿಯೇ ನೀಡುತ್ತೇವೆ’ ಎಂದರು.
‘ರೂ.8,500 ಕೋಟಿ ಮೊತ್ತದ ಮಾದರ ಚೆನ್ನಯ್ಯ ವಸತಿ ಯೋಜನೆಯಡಿ ಎಸ್ಸಿ ಸಮುದಾಯಗಳಿಗೆ ಆಧುನಿಕ ಮನೆಗಳ ನಿರ್ಮಾಣ, ಒಬಿಸಿಗಳಿಗೆ ಆಧೂನಿಕ ಸೌಲಭ್ಯ ಹೊಂದಿರುವ ವಸತಿ ಸಂಕೀರ್ಣ ನಿರ್ಮಿಸಲು 7500 ಕೋಟಿ ರೂಪಾಯಿ ತೆಗೆದಿಟ್ಟಿದ್ದೇವೆ’ ಎಂದರು.
‘ದಲಿತರನ್ನು ಅವಮಾನಕ್ಕೊಳಪಡಿಸುವ ಯಾವುದೇ ಕೃತ್ಯವನ್ನು ಬಿಜೆಪಿ ಸಮರ್ಥಿಸಿಕೊಳ್ಳುವುದಿಲ್ಲ. ಆ ಸಮಾಜಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ, ದಲಿತರನ್ನು ಉನ್ನತೀಕರಣಗೊಳಿಸುಬವ ಎಲ್ಲಾ ಕಾರ್ಯವನ್ನೂ ಬಿಜೆಪಿ ಮಾಡುತ್ತಿದೆ’ ಎಂದರು.
ಡಾ.ಬಿಆರ್ ಅಂಬೇಡ್ಕರ್ ಬದುಕಿಗೆ ಸಂಬಂಧಿಸಿದ ಮೌವ್ , ದಾದರ್ ಮತ್ತು ಲಂಡನ್ನಲ್ಲಿನ ಜಾಗಗಳನ್ನು ’ಅಂಬೇಡ್ಕರ್ ತೀರ್ಥಸ್ಥಳ’ಬವಾಗಿ ಪರಿವರ್ತಿಸುತ್ತೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.