ಬನಸ್ಕಾಂತ : ಗುಜರಾತಿನ ಬನಸ್ಕಾಂತ ಜಿಲ್ಲೆಯ ರೈತ ಖೇತಜ್ ಸೋಲಂಕಿ ಆಲೂಗಡ್ಡೆ ಬೆಳೆಗೆ ಹೆಚ್ಚು ಹೆಸರುವಾಸಿಯಾದವರು. ಆದರೆ ಈ ಬಾರಿ ಕರಬೂಜವನ್ನೂ ಬೆಳೆಸುವ ಮೂಲಕ ಅವರು ಕೃಷಿಯಲ್ಲಿ ಹೊಸ ಅನುಭವವನ್ನು ಪಡೆದುಕೊಂಡಿದ್ದಾರೆ.
ಅತ್ಯಾಧುನಿಕ ನೀರಾವರಿ ಪದ್ಧತಿಯನ್ನು ಅಳವಡಿಸಿ 7 ಎಕರೆ ಪ್ರದೇಶದಲ್ಲಿ ಇವರು ಕರಬೂಜ ಬೆಳೆಯನ್ನು ಬೆಳೆಸಿದ್ದಾರೆ. ಕೇವಲ 70 ದಿನಗಳಲ್ಲಿ ಇವರಿಗೆ ಬರೋಬ್ಬರಿ ರೂ.21 ಲಕ್ಷ ಆದಾಯ ಬಂದಿದೆ.
ಫೆಬ್ರವರಿ 12ರಂದು ಇವರು ಕರಬೂಜವನ್ನು ಬಿತ್ತಿದ್ದರು, ಎಪ್ರಿಲ್ ಎರಡನೇ ವಾರಕ್ಕೆ ಫಸಲು ಅವರ ಕೈ ಸೇರಿದೆ.
ಆಲೂಗಡ್ಡೆಗೆ ಬೆಲೆ ಇಲ್ಲ ಎಂದು ಗೋಗರೆಯುವ ರೈತರಿಗೆ ಸೋಲಂಕಿ ನಿಜಕ್ಕೂ ಮಾದರಿ ಎನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.