×
Home About Us Advertise With s Contact Us

ಶಾರದಾ ಪ.ಪೂ. ಕಾಲೇಜಿಗೆ ಉತ್ತಮ ಫಲಿತಾಂಶ ; ಕು| ಅದಿತಿ ಅತುಲ್‌ಕುಮಾರ್ ಸುರಾಣ ರಾಜ್ಯಕ್ಕೆ ದ್ವಿತೀಯ

ಮಂಗಳೂರು :  ಮಾರ್ಚ್ 2018 ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ನಗರದ ಶಾರದಾ ಪ.ಪೂ. ಕಾಲೇಜು ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ವಿಜ್ಞಾನ ವಿಭಾಗದಿಂದ ಒಟ್ಟು 545 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 282 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), 233 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಮತ್ತು 1 ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಒಟ್ಟಾಗಿ 98.35 ಶೇಕಡಾ ಫಲಿತಾಂಶ ಬಂದಿರುತ್ತದೆ.

ಹಾಗೆಯೇ ವಾಣಿಜ್ಯ ವಿಭಾಗದಲ್ಲಿ ಒಟ್ಟು 165 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 71 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 66 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೂ, 17 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲೂ, 5 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿ ಒಟ್ಟು 96.36 ಶೇಕಡಾ ಫಲಿತಾಂಶ ದಾಖಲಾಗಿರುತ್ತದೆ. ವಿಜ್ಞಾನ ವಿಭಾಗ – 98.76% ; ವಾಣಿಜ್ಯ ವಿಭಾಗ – 96.36% ಆಗಿರುತ್ತದೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಿಶಾಲ್ ಮೆಲಿಟಾ ಪಿರೇರಾ ಅವರು 600 ಅಂಕಗಳಲ್ಲಿ 591 ಅಂಕ ಗಳಿಸಿದರೆ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅದಿತಿ ಅತುಲ್ ಕುಮಾರ್ ಸುರಾನಾ ಅವರು 600 ರಲ್ಲಿ 594 ಅಂಕವನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಫಲಿತಾಂಶ ಕಾಲೇಜಿಗೆ ಕೀರ್ತಿ ತಂದಿದೆ. ಅದಕ್ಕೂ ಮುಖ್ಯವಾಗಿ ಒಂದನೇಯ ತರಗತಿಯಿಂದಲೇ ಶಾರದಾ ವಿದ್ಯಾಲಯಕ್ಕೆ ಸೇರಿ ಇದೀಗ ದ್ವಿತೀಯ ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ ಕು| ಅದಿತಿ ಅತುಲ್‌ಕುಮಾರ್ ಸುರಾಣ ಹಾಗೂ ಅವರ ಹೆತ್ತವರನ್ನು ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಪ್ರಾಂಶುಪಾಲರು, ಉಪನ್ಯಾಸಕ ವೃಂದವನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ಅಭಿನಂದಿಸಿದ್ದಾರೆ.

ವಾಣಿಜ್ಯ ವಿಭಾಗ : ಅದಿತಿ ಅತುಲ್ ಕುಮಾರ್ ಸುರಾನಾ (594/600)
ಇವರು ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 594 ಅಂಕಗಳಿಸಿ ರಾಜ್ಯದಲ್ಲೇ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರು ಇಂಗ್ಲೀಷ್ – 95, ಹಿಂದಿ – 99, ಬಿಸಿನೆಸ್ ಸ್ಟಡೀಸ್ – 100, ಲೆಕ್ಕ ಶಾಸ್ತ್ರ – 100, ಸಂಖ್ಯಾಶಾಸ್ತ್ರ – 100, ಬೇಸಿಕ್ ಮ್ಯಾಥ್ಸ್- 100 ಅಂಕಗಳನ್ನು ಗಳಿಸಿರುತ್ತಾರೆ.

ವಿಜ್ಞಾನ ವಿಭಾಗ : ರಿಶಾಲ್ ಮೆಲಿಟಾ ಪಿರೇರಾ (591/600)
ಇವರು ವಿಜ್ಞಾನ ವಿಭಾಗದಲ್ಲಿ 600 ಅಂಕಗಳಲ್ಲಿ 591 ಅಂಕಗಳನ್ನು ಪಡೆದಿರುತ್ತಾರೆ. ಅವರು ಇಂಗ್ಲೀಷ್ – 96, ಸಂಸ್ಕೃತ – 97, ಭೌತಶಾಸ್ತ್ರ – 100, ರಸಾಯನ ಶಾಸ್ತ್ರ – 99, ಗಣಿತ – 100, ಇಲೆಕ್ಟ್ರಾನಿಕ್ಸ್ – 99 ಅಂಕಗಳನ್ನು ಗಳಿಸಿರುತ್ತಾರೆ.

Leave a Reply

Your email address will not be published. Required fields are marked *

 

 

 

 

 

 

 

 

Recent News

Back To Top
error: Content is protected !!