ಉಜೈನಿ: ವಿಜ್ಞಾನದ ಸುಧಾರಣೆಗೆ ವೇದಗಳ ಅಧ್ಯಯನ ಅತ್ಯಗತ್ಯ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಉಜೈನಿಯಲ್ಲಿ ಆಯೋಜಿಸಲಾದ ವಿರಾಟ್ ಗುರುಕುಲ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ‘ಪ್ರಾಚೀನ ಗುರಕುಲ ವ್ಯವಸ್ಥೆಯಡಿ ಜ್ಞಾನದ ವಿಭಾಗಗಳಲ್ಲಿ ಕಠಿಣವಾದ ವರ್ಗೀಕರಣ ಇರಲಿಲ್ಲ’ ಎಂದಿದ್ದಾರೆ.
‘ವಿಜ್ಞಾನ ಅಂತ್ಯವಾದಲ್ಲಿ ಆಧ್ಯಾತ್ಮಿಕತೆ ಆರಂಭವಾಗುತ್ತದೆ ಎಂದ ಅವರು, ಪ್ರಾಚೀನ ವಿದ್ಯೆಯ ಪಂಚಕರ್ಮ ಚಿಕಿತ್ಸೆ ಮಗುವಿನ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ’ ಎಂದರು.
‘ನಾಗರಿಕತೆಯ ಯುಗದಲ್ಲಿ ಶಾಸ್ತ್ರಗಳ ಅಧ್ಯಯನವೂ ಮಹತ್ವದ ಬದಲಾವಣೆಗಳಿಗೆ ಒಳಪಡಬೇಕು, ಗುರುಕುಲ ಪದ್ಧತಿಯೂ ಸಂಶೋಧನೆಗಳಿಗೆ ಒಳಪಡಬೇಕಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.