ಮುಂಬಯಿ: ಡಿಜಿಟಲೀಕರಣಕ್ಕೆ ಬದಲಾದ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಕಳೆದ ಐದು ವರ್ಷದಲ್ಲಿ ಬರೋಬ್ಬರಿ ರೂ.977 ಕೋಟಿ ಉಳಿತಾಯವಾಗಿದೆ. ವರದಿಯ ಪ್ರಕಾರ 2013-14ರಿಂದ ಇಲಾಖೆಯು ಪೋಸ್ಟೇಜ್ ಕಾರ್ಡ್ಗಳ ಬದಲು ಇಮೇಲ್ಗಳ ಬಳಕೆಯನ್ನು ದುಪ್ಪಟ್ಟುಗೊಳಿಸಿದೆ.
ಜನರಿಗೆ ನೋಟಿಸ್ ಕಳುಹಿಸಲು, ಸಂವಹನ ನಡೆಸಲು ಪೋಸ್ಟಲ್ ಕಾರ್ಡ್ಗಳ ಬಳಕೆಯ ಬದಲು ಆದಾಯ ಇಲಾಖೆ ಇಮೇಲ್ಗಳನ್ನು ಬಳಸುತ್ತಿದೆ. ಇದರಿಂದ ಕಳೆದ ವರ್ಷ ರೂ.212.27 ಕೋಟಿ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.
2014ರ ಹಣಕಾಸು ವರ್ಷದಲ್ಲಿ 6.56 ಕೋಟಿ ಇಮೇಲ್ಗಳನ್ನು ಕಳುಹಿಸಲಾಗಿದೆ, 2017ರ ಹಣಕಾಸು ವರ್ಷದಲ್ಲಿ 12 ಕೋಟಿ ಇಮೇಲ್ಗಳನ್ನು ಕಳುಹಿಸಿಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.