ನವದೆಹಲಿ: ಸಂಸ್ಕೃತ ಭಾಷೆ ಕೇವಲ ಆಧ್ಯಾತ್ಮಿಕತೆ, ತತ್ವಜ್ಞಾನ, ಸಾಹಿತ್ಯಗಳಿಗೆ ಸೀಮಿತವಾಗಿಲ್ಲ, ಅದನ್ನು ಯಾಂತ್ರಿಕ ಅಧ್ಯಯನ ಮತ್ತು ಕೃತಕ ಬುದ್ಧಿಮತ್ತೆಯಲ್ಲೂ ಬಳಸಬಹುದು. ಮಾತ್ರವಲ್ಲದೇ ಕ್ರಮಾವಳಿಗಳ ಬರವಣಿಗೆಗೂ ಅದು ಉಪಯುಕ್ತ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ನವದೆಹಲಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ 17ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ನಮ್ಮ ಬೌದ್ಧಿಕ ಬೆಳವಣಿಗೆಯ ಅದ್ಭುತ ಪ್ರಯಾಣದಲ್ಲಿ ಸಂಸ್ಕೃತ ಭಾಷೆ, ಸಾಹಿತ್ಯ, ವಿಜ್ಞಾನದ ಪರಂಪರೆ ಅತ್ಯಂತ ಪ್ರಭಾವಿ ಅಧ್ಯಾಯವಾಗಿದೆ’ ಎಂದಿದ್ದಾರೆ.
‘ಭಾರತದ ಆತ್ಮ ಸಂಸ್ಕೃತ ಭಾಷೆಯಲ್ಲಿ ಪ್ರತಿಫಲಿತವಾಗುತ್ತದೆ ಎನ್ನಲಾಗುತ್ತದೆ, ಸಂಸ್ಕೃತ ಹಲವಾರು ಭಾಷೆಗಳಿಗೆ ತಾಯಿ. ಆ ಭಾಷೆಯಲ್ಲಿರುವ ರಾಜಕೀಯದ ಜ್ಞಾನ ಪ್ರತ್ಸುತ ಸನ್ನಿವೇಶಕ್ಕೆ ಅತ್ಯಂತ ಅಗತ್ಯವಾಗಿದೆ’ ಎಂದು ಅವರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.