ನವದೆಹಲಿ: ವಿದೇಶಿ ದ್ರೋನ್ಗಳು ಭಾರತ ವಾಯುಯಾನ ಭದ್ರತೆಗೆ ಅಪಾಯಕಾರಿಯಾಗುವ ಸಂಭಾವ್ಯತೆಯ ಹಿನ್ನಲೆಯಲ್ಲಿ ಚೀನಾ ಮತ್ತು ಪಾಕಿಸ್ಥಾನ ಮೂಲದ ದ್ರೋನ್ಗಳನ್ನು ಪತ್ತೆ ಹಚ್ಚಲು ತರಬೇತಿಯನ್ನು ಪಡೆದುಕೊಳ್ಳುವ ಸಲುವಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF)ಯು ಭಾರತೀಯ ಸೇನೆಯೊಂದಿಗೆ ಕೈಜೋಡಿಸಿದೆ.
ಕಳೆದ ತಿಂಗಳು ಒರಿಸ್ಸಾದ ಗೋಪಾಲಪುರದಲ್ಲಿ 6 ದಿನಗಳ ತರಬೇತಿ ಕಾರ್ಯಕ್ರಮ ಜರುಗಿತ್ತು, ಇನ್ನು ಮುಂದೆ ಇಂತಹ ಹಲವಾರು ತರಬೇತಿಗಳನ್ನು ದೇಶದ ವಿವಿಧ 59 ವಿಮಾನನಿಲ್ದಾಣಗಳಲ್ಲಿ ನಡೆಸುವ ಯೋಜನೆಯನ್ನು ರೂಪಿಸಲಾಗಿದೆ.
ಇದುವರೆಗೆ ಸುಮಾರು 60-70 ಗುರುತಿಸಲಾಗದ ಹಾರುವ ವಸ್ತುಗಳನ್ನು ವೀಕ್ಷಿಸಲಾಗಿದೆ. ಆದರೆ ಅವುಗಳ ಮೂಲ ಯಾವುದು ಎಂಬುದನ್ನು ಪತ್ತೆ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ.
ಹೀಗಾಗಿ ಸೇನೆಯಿಂದ ತರಬೇತಿಯನ್ನು ಪಡೆದುಕೊಳ್ಳಲು CISFಈ ನಿರ್ಧರಿಸಿದೆ. ಇದರಿಂದ ಹಾರುವ ವಸ್ತುವನ್ನು ಪತ್ತೆ ಮಾಡುವುದು ಮಾತ್ರವಲ್ಲ, ಅದನ್ನು ನೆಲಕ್ಕುರುಳಿಸಲೂ ಸಾಧ್ಯವಾಗಲಿದೆ ಎಂದು CISFಈ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.