ಮುಂಬಯಿ: ಮಹಾರಾಷ್ಟ್ರದ ಕೊಂಕಣ್ ಭಾಗದಲ್ಲಿ ಬೆಳೆಯಲಾಗುವ ಮಾವಿನ ಹಣ್ಣಿಗೆ ಮಾತ್ರ ಇನ್ನು ಮುಂದೆ ಆಪುಸ್ ( Alp- honso ) ಎಂದು ಕರೆಯಲಾಗುತ್ತದೆ.
ಮುಂಬಯಿಯಲ್ಲಿನ ಜಿಯೋಗ್ರಾಫಿಕಲ್ ಇಂಡಿಕೇಶನ್(ಜಿಐ) ರಿಜಿಸ್ಟ್ರಾರ್ ಕೊಂಕಣ್ ಭಾಗದ ಮಾವಿನ ಹಣ್ಣು ಬೆಳೆಗಾರರ ಮತ್ತು ಕೃಷಿ ಸಂಶೋಧಕ ಸಂಸ್ಥೆಗಳ ಅರ್ಜಿಯನ್ನು ಪುರಸ್ಕರಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಇದು ಅತ್ಯಂತ ಉತ್ಕೃಷ್ಟವಾದ ಮಾವಿನ ಹಣ್ಣಾಗಿದ್ದು, ಜಗತ್ತಿನಾದ್ಯಂತ ಇದಕ್ಕೆ ಭಾರೀ ಬೇಡಿಕೆಯಿದೆ. ಮಹಾರಾಷ್ಟ್ರದ ಸಿಂಧುದುರ್ಗ್, ರತ್ನಗಿರಿ, ರಾಯ್ಗಢ್ ಜಿಲ್ಲೆಗಳಲ್ಲಿ ಇದನ್ನು ಬೆಳೆಯಲಾಗುತ್ತದೆ.
ಹಣ್ಣಿನ ಪ್ರಾದೇಶಿಕತೆಯ ಗುರುತಿಸುವಿಕೆಗೆ ಜಿಐ ಟ್ಯಾಗ್ ನೀಡಲಾಗುತ್ತದೆ. ಹೀಗಾಗಿ ಆ ಭಾಗದ ಬೆಳೆಗಾರರು ಮಾತ್ರ ತಮ್ಮ ಬೆಳೆಗೆ ಹೆಸರನ್ನು ಬಳಸಿಕೊಳ್ಳಬಹುದಾಗಿದೆ. ಡಾರ್ಜಿಲಿಂಗ್ ಟೀ, ಚಂದೇರಿ ಸಾರೀಸ್, ಕೂರ್ಗ್ ಆರೇಂಜಸ್ ಜಿಐ ಹೊಂದಿದ ಇತರ ಹಣ್ಣುಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.