ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಆರು ಚುನಾವಣೆಗಳನ್ನು ಭಾರತ ಗೆದ್ದುಕೊಂಡಿದೆ. ಸೋಮವಾರ ಚುನಾವಣೆ ನಡೆದಿದ್ದು, ಐದರಲ್ಲಿ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ವಿಶ್ವಸಂಸ್ಥೆಯ 4 ಕಾರ್ಯನಿರ್ವಾಹಕ ಮಂಡಳಿಗಳಲ್ಲಿ ಮತ್ತು 3 ಸಮಿತಿಗಳಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ.
ಕೇವಲ ಸರ್ಕಾರೇತರ ಸಂಸ್ಥೆ (ಎನ್ಜಿಒ) ಸಮಿತಿಗಳಿಗೆ ಏಷ್ಯಾ ಪೆಸಿಫಿಕ್ ಗ್ರೂಪ್ ಒಳಗಡೆ ಭಾರತ ಚುನಾವಣೆ ಎದುರಿಸಿದ್ದು, ಅತೀ ಹೆಚ್ಚಿನ ಮತವನ್ನು ಪಡೆದುಕೊಂಡಿದೆ. ಭಾರತಕ್ಕೆ 46, ಪಾಕಿಸ್ಥಾನಕ್ಕೆ 43, ಚೀನಾಗೆ 39 ಮತ ದೊರೆತಿದೆ.
ಏಷ್ಯಾ-ಪೆಸಿಫಿಕ್ ವೋಟ್ ಬಳಿಕ ಎಲ್ಲಾ ಐದರಲ್ಲಿ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ವಿಶ್ವಸಂಸ್ಥೆಯಲ್ಲಿ ಒಟ್ಟು 193 ಸದಸ್ಯ ರಾಷ್ಟ್ರಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.