ನವದೆಹಲಿ: ವಾರಣಾಸಿಯ ಐತಿಹಾಸಿಕ ಹೆಗ್ಗುರುತು ಬಾಲಾಜಿ ಘಾಟ್ನ್ನು ಪುನಃ ಸ್ಥಾಪನೆ ಮಾಡಲಾಗಿದೆ ಎಂದು ಅಮೆರಿಕನ್ ಎಕ್ಸ್ಪ್ರೆಸ್, ವರ್ಲ್ಡ್ ಮಾನ್ಯುಮೆಂಟ್ ಫಂಡ್(WMF), ಇಂಡಿಯನ್ ನ್ಯಾಷನಲ್ ಟ್ರಸ್ಟ್ ಆಫ್ ಆರ್ಟ್ ಆಂಡ್ ಕಲ್ಚುರಲ್ ಹೆರಿಟೇಜ್ (INTACH) ಸೋಮವಾರ ಘೋಷಣೆ ಮಾಡಿದೆ.
ಈ ಹಿನ್ನಲೆಯಲ್ಲಿ ಬಾಲಾಜಿ ಘಾಟ್ನಲ್ಲಿ ಮ್ಯೂಸಿಯಂ ಮತ್ತು ಸಾಂಸ್ಕೃತಿಕ ಸೆಂಟರ್ನ್ನು ಪ್ರವಾಸಿಗರಿಗಾಗಿ ಲೋಕಾರ್ಪಣೆಗೊಳಿಸಲಾಗಿದೆ.
2012ರಲ್ಲಿ ಯುಬಾಲಾಜಿ ಘಾಟ್ನ್ನು ನವರ್ಲ್ಡ್ ಮಾನ್ಯುಮೆಂಟ್ ವಾಚ್ಗೆ ನಾಮನಿರ್ದೇಶನಗೊಳಿಸಿತ್ತು. ಐತಿಹಾಸಿಕ ತಾಣದ ಸಾಂಸ್ಕೃತಿಕ ಮಹತ್ವವನ್ನು ತಿಳಿಸುವ ಮತ್ತು ಅದಕ್ಕೆ ಅಗತ್ಯವಿರುವ ಸಂರಕ್ಷಣಾ ಕಾರ್ಯವನ್ನು ನೆರವೇರಿಸುವ ಸಲುವಾಗಿ ನಾಮನಿರ್ದೇಶನಗೊಳಿಸಲಾಗಿತ್ತು. ಈ ವೇಳೆ ಅಮೆರಿಕನ್ ಎಕ್ಸ್ಪ್ರೆಸ್ ರೂ.1.15 ಕೋಟಿಗಳ ಅನುದಾನವನ್ನು ಘೋಷಣೆ ಮಾಡಿತ್ತು.
ಅಲ್ಲಿಂದ ನಿರಂತರವಾಗಿ ಬಾಲಾಜಿ ಘಾಟ್ ಸಂರಕ್ಷಣಾ ಕಾರ್ಯ ನಡೆದಿದ್ದು, ಪ್ರಸ್ತುತ ಕಾಮಗಾರಿ ಸಂಪನ್ನಗೊಂಡಿದೆ.
1735 ರಾಜ ಬಾಲಾಜಿ ಪೇಶ್ವಾ ಈ ಘಾಟ್ನ್ನು ನಿರ್ಮಿಸಿದ್ದು, ಪ್ರಮುಖ ಯಾತ್ರಾ ತಾಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.