ಹೈದರಾಬಾದ್: ಹೈದರಾಬಾದ್ ಮೂಲದ 7 ವರ್ಷದ ಬಾಲಕನೊಬ್ಬ ಆಫ್ರಿಕಾದ ಅತೀ ಎತ್ತರದ ಮೌಂಟ್ ಕಿಲಿಮಂಜಾರೋದ ತುತ್ತ ತುದಿ ಹುರುವನ್ನು ಏರಿ ಮಹತ್ತರವಾದ ಸಾಧನೆಯನ್ನು ಮಾಡಿದ್ದಾನೆ.
ಎಪ್ರಿಲ್ 2ರಂದು ಸಮುದ್ರ ಮಟ್ಟಕ್ಕಿಂತ 5,895ಮೀಟರ್ ಎತ್ತರದಲ್ಲಿರುವ ತಾಂಜೇನಿಯಾದ ಕಿಲಿಮಂಜಾರೋದ ತುತ್ತತುದಿಯಲ್ಲಿ ನಿಂತು ಸಮನ್ಯು ಪೊತುರಾಜು ತ್ರಿವರ್ಣ ಧ್ವಜ ಹಾರಿಸಿದ್ದಾನೆ.
ಸಮನ್ಯುಗೆ ಅವರ ಕೋಚ್ ತಮ್ಮಿನೇನಿ ಭರತ್ ಮತ್ತು ತಾಯಿ ಲಾವಣ್ಯ ಸಾಥ್ ನೀಡಿದ್ದು, ಆತನೊಂದಿಗೆ ಇವರೂ ಮೌಂಟ್ ಕಿಲಿಮಂಜಾರೋವನ್ನು ಏರಿದ್ದಾರೆ.
ಮಾ.29೨೯ರಂದು ಇವರು ಬೇಸ್ ಪಾಯಿಂಟ್ನಿಂದ ಹತ್ತಲು ಆರಂಭಿಸಿದ್ದು, ತುತ್ತ ತುದಿಯನ್ನು ಏರಲು ಐದು ದಿನಗಳನ್ನು ತೆಗೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.