ನವದೆಹಲಿ: ಮುಂಬಯಿ-ಅಹ್ಮದಾಬಾದ್ ನಡುವಣ ಬುಲೆಟ್ ರೈಲು ಯೋಜನೆಯ ಸಾಬರಮತಿ ರೈಲ್ವೇ ಸ್ಟೇಶನ್ ಮಹಾತ್ಮ ಗಾಂಧೀಜಿಯವರು ದಂಡಿ ಸತ್ಯಾಗ್ರಹ ಥೀಮ್ನ್ನು ಒಳಗೊಳ್ಳಲಿದೆ.
ಸಾಬರಮತಿಯಲ್ಲಿ ನಿರ್ಮಾಣವಾಗಲಿರುವ ದೇಶದ ಮೊದಲ ಬುಲೆಟ್ ರೈಲ್ವೇ ಸ್ಟೇಶನ್ಗೆ ವಿನ್ಯಾಸವನ್ನು ಈಗಾಗಲೇ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ ಅಂತಿಮಗೊಳಿಸಿದ್ದು, ದಂಡಿ ಸತ್ಯಾಗ್ರಹದ ಥೀಮ್ ಇರಲಿದೆ.
ಬರೋಬ್ಬರಿ 240 ಕೋಟಿ ರೂಪಾಯಿಗಳಲ್ಲಿ ಸ್ಟೇಶನ್ ನಿರ್ಮಾಣವಾಗಲಿದ್ದು, 1,500 ವಾಹನಗಳ ನಿಲುಗಡೆ ಸಾಮರ್ಥ್ಯವಿರುವ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಳ್ಳಲಿದೆ.
ಸಾಬರಮತಿಯಿಂದ ಬುಲೆಟ್ ರೈಲ್ ಮೂಲಕ ಮುಂಬಯಿಗೆ ಪ್ರಯಾಣಿಸಲಿಚ್ಛಿಸುವ ಪ್ರಯಾಣಿಕರು ರೂ.3,000 ಟಿಕೆಟ್ ನೀಡಬೇಕಿದೆ.