ಶ್ರೀನಗರ: ಜಮ್ಮು ಕಾಶ್ಮೀರದ ಕತ್ವಾದಲ್ಲಿ ನಡೆದ ೮ ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶದ್ಯಾಂತ ಆಕ್ರೋಶವನ್ನು ಹುಟ್ಟು ಹಾಕಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಮೆನಕಾ ಗಾಂಧಿ, ‘ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸುವ ಕಾನೂನು ತರಲಿದ್ದೇವೆ’ ಎಂದಿದ್ದಾರೆ.
ವೀಡಿಯೋ ಮೂಲಕ ಹೇಳಿಕೆ ನೀಡಿರುವ ಅವರು, ‘ಸೋಮವಾರ ತಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಪೋಸ್ಕೋ ಕಾಯ್ದೆಗೆ ತಿದ್ದುಪಡಿ ಮಾಡುವ ಸಲುವಾಗಿ ಸಂಪುಟದ ಅನುಮೋದನೆಗೆ ಪ್ರಸ್ತಾಪ ಮಾಡಲಿದೆ’ ಎಂದಿದ್ದಾರೆ.
‘ಕತ್ವಾದ ಪ್ರಕರಣದಿಂದ ತುಂಬಾ ಅಧೀರಳಾಗಿದ್ದೇನೆ. ಇತ್ತೀಚಿನ ಬಹುತೇಕ ರೇಪ್ ಪ್ರಕರಣಗಳು ಮಕ್ಕಳ ಮೇಲಾಗಿದೆ. ಹೀಗಾಗಿ ಪೋಸ್ಕೋ ಕಾಯ್ದೆಗೆ ತಿದ್ದುಪಡಿ ತರಲು ಬಯಸುತ್ತಿದ್ದೇವೆ’ ಎಂದಿದ್ದಾರೆ.