ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯ ಕರಾಳ ಘಟನೆಯೆಂದು ಪರಿಗಣಿಸಲ್ಪಟ್ಟಿರುವ ಜಲಿಯನ್ ವಾಲಾ ಬಾಗ್ ನರಮೇಧ ನಡೆದು ಇಂದಿಗೆ 99 ವರ್ಷಗಳು ಸಂದಿವೆ. 1919ರ ಎಪ್ರಿಲ್ 13ರಂದು ಈ ಘಟನೆ ಜರುಗಿತ್ತು.
ಪಂಜಾಬ್ನ ಅಮೃತಸರದಲ್ಲಿ ಜಲಿಯನ್ ವಾಲಾ ಬಾಗ್ನಲ್ಲಿ ನೆರೆದಿದ್ದ ಬೈಶಾಕಿ ಯಾತ್ರಿಕರ ಮೇಲೆ ಬ್ರಿಟಿಷ್ ಕೊಲೊನಿಯಲ್ ರೆಜಿನಾಲ್ಡ್ ಡಯರ್ನ ಆದೇಶದ ಮೇರೆ ಬ್ರಿಟಿಷ್ ನೇತೃತ್ವದ ಸೇನೆ ಏಕಾಏಕಿ ಗುಂಡಿನ ಮಳೆಗರೆದಿತ್ತು. ಈ ಘಟನೆಯಲ್ಲಿ 379 ಮಂದಿ ಮೃತರಾಗಿದ್ದರು ಮತ್ತು 1,200 ಮಂದಿ ಗಾಯಗೊಂಡಿದ್ದರು.
ಈ ನರಮೇಧ ಘಟಿಸಿ ಇಂದಿಗೆ 99 ವರ್ಷಗಳಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಇದನ್ನು ಸ್ಮರಿಸಿ, ಘಟನೆಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
‘ಹುತಾತ್ಮರ ಅದಮ್ಯ ಸ್ಫೂರ್ತಿ ನಿತ್ಯವೂ ಸ್ಮರಿಸಲ್ಪಡುತ್ತದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಅವರು ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ’ ಎಂದಿದ್ದಾರೆ.
Tributes to the brave martyrs of the Jallianwala Bagh massacre. The indomitable spirit of the martyrs will always be remembered. They sacrificed their lives for our freedom.
— Narendra Modi (@narendramodi) April 13, 2018