ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ನ ಪುರುಷರ ಸಿಂಗಲ್ಸ್ನಲ್ಲಿ ನಂ.1ಪಟ್ಟಕ್ಕೇರಿದ್ದಾರೆ.
25 ವರ್ಷದ ಶಟ್ಲರ್ 2017ರಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ದಾಖಲೆಯ 4 ಸೂಪರ್ ಸಿರೀಸ್ ಟೈಟಲ್ಗಳನ್ನು ಗೆದ್ದಿದ್ದಾರೆ. ಇದರಿಂದಾಗಿ ಅವರ ರೇಟಿಂಗ್ ಪಾಯಿಂಟ್ಸ್ 76895ಕ್ಕೆ ತಲುಪಿತ್ತು. ಇದುವರೆಗೆ ಈ ಸಾಧನೆಯನ್ನು ಭಾರತದ ಯಾವುದೇ ಪುರುಷ ಬ್ಯಾಡ್ಮಿಂಟನ್ ಆಟಗಾರ ಮಾಡಿಲ್ಲ.
ಫ್ರೆಬವರಿಯಲ್ಲಿ ಇವರಿಗೆ ಮಹೀಂದ್ರ ಸ್ಕಾರ್ಪಿಯೋ ಟೈಮ್ಸ್ ಆಫ್ ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ ವತಿಯಿಂದ ‘ಸ್ಪೋರ್ಟ್ಸ್ ಮ್ಯಾನ್ ಆಫ್ ದಿ ಇಯರ್’ ಅವಾರ್ಡ್ ದೊರೆತಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.