ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 5,000 ಅಡ್ವಾನ್ಸ್ಡ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್(ಇವಿಎಂ)ಗಳನ್ನು ಮತ್ತು ವೋಟರ್ ವೆರಿಫೈಯ್ಡ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ)ಗಳನ್ನು ಬಳಸಲಾಗುತ್ತಿದೆ.
ವಿವಿಪಿಎಟಿಗಳು ಅಟೋಮ್ಯಾಟಿಕ್ ಆಗಿ ತಪ್ಪುಗಳನ್ನು ಮತ್ತು ಟ್ಯಾಂಪರಿಂಗ್ಗಳನ್ನು ಡಿಟೆಕ್ಟ್ ಮಾಡಲಿವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಇದರನ್ನು ಸಪ್ಲೈ ಮಾಡಲಿದೆ.
ಈ ಅತ್ಯಾಧುನಿಕ ವೋಟಿಂಗ್ ಮೆಶಿನ್ಗಳನ್ನು ಇದೇ ಮೊದಲ ಬಾರಿಗೆ ಕರ್ನಾಟಕ ಚುನಾವಣೆಯಲ್ಲಿ ಬಳಸಲಾಗುತ್ತಿದೆ. ಬೆಂಗಳೂರು ಕ್ಷೇತ್ರಗಳ ಮತಗಟ್ಟೆಗಳಲ್ಲಿ ಇದನ್ನು ನಿಯೋಜನೆಗೊಳಸಿಲಾಗುತ್ತಿದೆ.