ಸ್ವಾಜಿಲ್ಯಾಂಡ್: 3 ರಾಷ್ಟ್ರಗಳ ಆಫ್ರಿಕಾ ಪ್ರವಾಸ ಹಮ್ಮಿಕೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಸ್ವಾಜಿಲ್ಯಾಂಡ್ಗೆ ಭೇಟಿಯಿತ್ತಿದ್ದು, ಅಲ್ಲಿನ ಪಿಎಂ ಬರ್ನಬಸ್ ಸಿಬುಸಿಸು ದ್ಲಾಮಿನಿ ಅವರು ಬರಮಾಡಿಕೊಂಡರು.
ಸ್ವಾಜಿಲ್ಯಾಂಡ್ ಪಾರ್ಲಿಮೆಂಟ್ನ್ನು ಉದ್ದೇಶಿಸಿ ಕೋವಿಂದ್ ಮಾತನಾಡಿದರು, ಈ ವೇಳೆ ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಅಲ್ಲಿನ ರಾಜನನ್ನೂ ಕೋವಿಂದ್ ಅವರು ಲೊಝಿತ ಪ್ಯಾಲೇಸ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಆರೋಗ್ಯ ಸೇವೆ, ಔಷಧಿ ಮತ್ತು ರಾಜತಾಂತ್ರಿಕ ಹಾಗೂ ಅಧಿಕೃತ ಪಾಸ್ಪೋರ್ಟ್ ಹೊಂದಿದವರಿಗೆ ವೀಸಾ ವಿನಾಯಿತಿ ಮುಂತಾದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ರಾಷ್ಟ್ರಪತಿಗಳ ಈ ಪ್ರವಾಸ ಆಫ್ರಿಕಾ ದೇಶಗಳೊಂದಿಗಿನ ಭಾರತದ ಸಂಬಂಧವನ್ನು ವೃದ್ಧಿ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.