ಅಲ್ವರ್: ಶಾಲೆಯ ಕಟ್ಟಡ ಸುಂದರವಾಗಿದಷ್ಟು ವಿದ್ಯಾರ್ಥಿಗಳು ಅದರತ್ತ ಆಕರ್ಷಿತರಾಗುತ್ತಾರೆ. ಉತ್ತಮ ಪರಿಸರ, ಉತ್ತಮ ನೋಟವುಳ್ಳ ಶಾಲೆಗಳ ಶಿಕ್ಷಣದ ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂಬುದು ಸಾಮಾನ್ಯ ನಂಬಿಕೆ.
ರಾಜಸ್ಥಾನದ ಅಲ್ವರ್ ಗ್ರಾಮದ ಸರ್ಕಾರಿ ಶಾಲೆಯೊಂದು ಇಡೀ ದೇಶದ ಗಮನವನ್ನೆ ತನ್ನತ್ತ ಸೆಳೆಯುವಂತೆ ಮಾಡಿದೆ. ರೈಲಿನ ಮಾದರಿಯಲ್ಲೇ ಈ ಶಾಲೆಯನ್ನು ಪೇಯಿಂಟ್ ಮಾಡಲಾಗಿದೆ. ಮೇಲ್ನೋಟಕ್ಕೆ ರೈಲಿನಂತೆಯೇ ಈ ಶಾಲೆ ಕಂಡು ಬರುತ್ತಿದೆ.
ಕ್ಲಾಸ್ರೂಮ್ಗಳನ್ನು ಪಾಸೆಂಜರ್ ಕಂಪಾರ್ಟ್ಮೆಂಟ್ನಂತೆ ಪೇಯಿಂಟ್ ಮಾಡಲಾಗಿದೆ. ಪ್ರಾಂಶುಪಾಲರ ಕಛೇರಿ ಎಂಜಿನ್ ಥರಹ ಮತ್ತು ವರಾಂಡ ಪ್ಲಾಟ್ಫಾರ್ಮ್ ತರಹ ಗೋಚರಿಸುತ್ತದೆ.
‘ಮಕ್ಕಳಿಗೆ ರೈಲೆಂದರೆ ಅಚ್ಚುಮೆಚ್ಚು. ಅದರ ಪ್ರಯಾಣವನ್ನು ಅವರು ಇಷ್ಟಪಡುತ್ತಾರೆ. ಅದಕ್ಕಾಗಿ ಶಾಲೆಯನ್ನೇ ರೈಲಿನಂತೆ ಪೇಯಿಂಟ್ ಮಾಡಿದ್ದೇವೆ ಎಂದು ಅಲ್ಲಿನ ಪ್ರಾಂಶುಪಾಲ ಪುರುಷೋತ್ತಮ ಗುಪ್ತಾ’ ಹೇಳಿದ್ದಾರೆ.