ಮೋದಿ ಸರಕಾರದ ಸಾಧನೆಗಳ ಪಟ್ಟಿಯಲ್ಲಿ ನೋಟು ಅಮಾನ್ಯೀಕರಣ, ಜಿ ಎಸ್ ಟಿ ಜಾರಿ, ಸ್ವಚ್ಛ ಭಾರತ, ಜನಧನ್, ಆಯುಶ್ಮಾನ್ ಭವ ಆರೋಗ್ಯ ವಿಮೆ, ಕಡಿಮೆ ಬೆಲೆಯಲ್ಲಿ ಔಷಧ ಸಿಗುವ ಜನೌಷಧ ಯೋಜನೆ, ಬುಲೆಟ್ ಟ್ರೈನ್ ಯೋಜನೆ, ಸೈನಿಕರಿಗೆ ವನ್ ರ್ಯಾಂಕ್-ವನ್ ಪೆನ್ಷನ್ ಯೋಜನೆ, ಮುದ್ರಾ ಸಾಲ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮೊದಲಾದವುಗಳು ಮಾತ್ರ ಹೆಚ್ಚಿನವರಿಗೆ ತಿಳಿದಿರುವಂತಹದ್ದು. ಆದರೆ ಮೋದಿ ಸರಕಾರ ಮಾಡಿದ ವಿಶೇಷ ಸಾಧನೆಗಳ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವುಗಳು ಈ ಕೆಳಗಿನಂತಿವೆ.
1. ಮೋದಿ ಆಡಳಿತದ ಅವಧಿಯ 4 ವರ್ಷಗಳಲ್ಲಿ ಜನಸಾಮಾನ್ಯರ ಮೇಲೆ/ನಗರಗಳ ಮೇಲೆ ಯಾವುದೇ ರೀತಿಯ ಉಗ್ರಗಾಮಿಗಳ ದಾಳಿಯಾಗಿಲ್ಲ. ಇದು ದೇಶದ ನಾಗರಿಕನನ್ನು ಸಂರಕ್ಷಿಸುವಲ್ಲಿನ ಮೋದಿ ಸರಕಾರದ ಬದ್ಧತೆಯನ್ನು ತೋರಿಸುತ್ತದೆ.
2. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ರೈಲ್ವೇ ಅಪಘಾತಗಳು ಗಣನೀಯವಾಗಿ ಕಡಿಮೆಯಾಗಿದೆ. ಭಾರತೀಯ ರೈಲ್ವೇಯು 2017-18 ರಲ್ಲಿ ಕಳೆದ 35 ವರ್ಷಗಳಲ್ಲೇ ಮೊದಲ ಬಾರಿಗೆ 100 ರಿಂದ ಕಡಿಮೆ ಸಂಖ್ಯೆಯ ಅಪಘಾತ ಕಂಡಿದೆ. 2017-18 ರಲ್ಲಿ ರೈಲ್ವೇ ಕೇವಲ 72 ಅಪಘಾತಗಳನ್ನು ದಾಖಲಿಸಿದೆ. ಇದು ಭಾರತೀಯ ರೈಲ್ವೇಯು ಪ್ರಯಾಣಿಕರ ಸುರಕ್ಷಾ ವ್ಯವಸ್ಥೆಗೆ ಕೊಟ್ಟ ಆದ್ಯತೆಗೆ ಕೈಗನ್ನಡಿ ಯಾಗಿದೆ.
3. ಮೋದಿ ಸರಕಾರದ ಕಳೆದ 4 ವರ್ಷಗಳ ಮೇಕ್ ಇನ್ ಇಂಡಿಯಾ ಯೋಜನೆಯ ಫಲವಾಗಿ ದೇಶವು ಹೆಚ್ಚು ಮೊಬೈಲ್ ಫೋನ್ ತಯಾರಿಕೆಯಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.
4. ಅಟೋಮೊಬೈಲ್ ಕ್ಷೇತ್ರದಲ್ಲಿ ಭಾರತವಿಂದು ಅಂದರೆ 2017-18 ರಲ್ಲಿ ಪ್ರಪಂಚದ 2 ನೇ ಅತೀ ಹೆಚ್ಚು ಉತ್ಪಾದಕ ರಾಷ್ಟ್ರವಾಗಿ ಬೆಳೆದಿದೆ. ಇದು ಕೂಡಾ ಮೇಕ್ ಇನ್ ಇಂಡಿಯಾದ ಯೋಜನೆಯ ಪರಿಣಾಮ.
5. ಭಾರತವಿಂದು ಕಚ್ಛಾ ಉಕ್ಕು (Crude Steel) ಉತ್ಪಾದನೆಯಲ್ಲಿ ಲೋಕದ 2 ನೇ ಅತೀ ಹೆಚ್ಚು ಉತ್ಪಾದಕ ರಾಷ್ಟ್ರವಾಗಿ ಬೆಳೆದಿದೆ. 2015 ರಲ್ಲಿ ಉಕ್ಕು ಉತ್ಪಾದನೆಯಲ್ಲಿ ಅಮೇರಿಕವನ್ನು ಹಿಂದಿಕ್ಕಿದ್ದ ಭಾರತ 2018 ರಲ್ಲಿ ಜಪಾನನ್ನು ಹಿಂದಿಕ್ಕಿ 2 ಸ್ಥಾನಕ್ಕೆ ಏರಿದೆ.
6. ಕಳೆದ 7 ವರ್ಷಗಳಲ್ಲಿ ಈ ವರ್ಷ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಆಗಿದೆ.
7. ವಿದ್ಯುತ್ ಉತ್ಪಾದನೆಯಲ್ಲಿ 2018 ರಲ್ಲಿ ಭಾರತವು ರಷ್ಯಾ ದೇಶವನ್ನು ಹಿಂದಿಕ್ಕಿ ಜಗತ್ತಿನ 3 ನೇ ಅತೀ ದೊಡ್ಡ ವಿದ್ಯುತ್ ಉತ್ಪಾದಕ ರಾಷ್ಟ್ರವಾಗಿ ಬೆಳೆದಿದೆ. ಸೋಲಾರ್ ಶಕ್ತಿಯಿಂದ 175 GW ವಿದ್ಯುತ್ ಉತ್ಪಾದನೆ ಆಗುತ್ತಿದೆ. 2014 ರಲ್ಲಿ ಸೋಲಾರ್ ಶಕ್ತಿ ಯಿಂದ 30 GW ವಿದ್ಯುತ್ ಮಾತ್ರ ಉತ್ಪಾದನೆ ಆಗುತ್ತಿತ್ತು.
8. ಏಪ್ರಿಲ್ 2018 ಕ್ಕೆ ಅನ್ವಯವಾಗುವಂತೆ ಭಾರತದ ವಿದೇಶೀ ವಿನಿಮಯ ಸಂಗ್ರಹವು 424.36 ಬಿಲಿಯನ್ ಡಾಲರ್ಗಳಾಗಿದೆ (ಅಂದಾಜು 25. 5 ಲಕ್ಷ ಕೋಟಿ ರೂಪಾಯಿಗಳು). 2014 ರಲ್ಲಿ ಭಾರತದ ವಿದೇಶೀ ವಿನಿಮಯ ಸಂಗ್ರಹವು 311 ಬಿಲಿಯನ್ ಡಾಲರ್ ಆಗಿತ್ತು. ಕಳೆದ 4 ವರ್ಷಗಳಲ್ಲಿ ವಿದೇಶಿ ವಿನಿಮಯ ಸಂಗ್ರಹದಲ್ಲಿ ದಾಖಲೆಯ 27% ಹೆಚ್ಚಳವಾಗಿದೆ.
9. 2017-18 ರಲ್ಲಿ ನೇರ ತೆರಿಗೆ (ಆದಾಯ ತೆರಿಗೆ, ಆಸ್ತಿ ತೆರಿಗೆ ಇತ್ಯಾದಿ) ಸಂಗ್ರಹದಲ್ಲಿ ದಾಖಲೆಯ 10.02 ಲಕ್ಷ ಕೋಟಿ ರೂಪಾಯಿಗಳು ಸಂಗ್ರಹವಾಗಿದೆ. 2014 ರಲ್ಲಿ ಇದು 5.83 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ಮೋದಿ ಸರಕಾರದ ಕಠಿಣ ಕ್ರಮಗಳ ಪರಿಣಾಮವಾಗಿ ತೆರಿಗೆ ಕಳ್ಳತನ ಕಡಿಮೆಯಾಗಿದ್ದು ನೇರ ತೆರಿಗೆಯು 2014 ರಲ್ಲಿ ಆದ ಸಂಗ್ರಹಕ್ಕಿಂತ 2018 ರಲ್ಲಿ ದುಪ್ಪಟ್ಟು ಸಂಗ್ರಹವಾಗಿದೆ. 2013-14 ರಲ್ಲಿ 3.79 ಕೋಟಿ ಜನರು ಆದಾಯ ತೆರಿಗೆ ಪಾವತಿಸಿದ್ದರೆ 2017-18 ರಲ್ಲಿ 6.84 ಕೋಟಿ ಜನರು ಆದಾಯ ತೆರಿಗೆ ಪಾವತಿಸಿದ್ದಾರೆ.
10. ಮೋದಿ ಸರಕಾರದ ಕಠಿಣ ಕಾರ್ಯಾಚರಣೆಯಿಂದ ಉದ್ಯಮಗಳು ಹಾಗೂ ಉದ್ಯಮಿಗಳಿಂದ 4 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಸಾಲ (NPA-Non Performing Assets ಅನುತ್ಪಾದಕ ಆಸ್ತಿ/ಸಾಲ) ದ ಮರುಪಾವತಿ ಆಗಿದೆ. ಮೋದಿ ಸರಕಾರವು Insolvency and Bankrupt Code (ದಿವಾಳಿ ಘೋಷಣಾ ಕಾನೂನು) ಕಾಯ್ದೆಯನ್ನು ಜಾರಿಗೆ ತಂದ ಕಾರಣ ಕಾನೂನು ಜಾರಿಗೊಂಡ ಕೆಲವೇ ತಿಂಗಳುಗಳಲ್ಲಿ ರುಪಾಯಿ 4 ಲಕ್ಷ ಕೋಟಿಗಳ ಸಾಲ ಮರುಪಾವತಿಗೊಂಡಿದೆ. ಭಾರತದ ಸ್ವಾತಂತ್ರ್ಯಾ ನಂತರ 4 ಲಕ್ಷ ಕೋಟಿ ರುಪಾಯಿಗಳಷ್ಟು ದೊಡ್ಡ ಮೊತ್ತದ ಅನುತ್ಪಾದಿತ ಸಾಲವು (NPA) ಮರುಪಾವತಿಯಾಗುತ್ತಿರುವುದು ಇದೇ ಮೊದಲು. ಬ್ಯಾಂಕ್ಗಳಿಗೆ ರೂಪಾಯಿ 9000 ಸಾವಿರ ಕೋಟಿ ಸಾಲ ಮಾಡಿ ದೇಶ ಬಿಟ್ಟು ಓಡಿದ ವಿಜಯ ಮಲ್ಯನ ರೂಪಾಯಿ 11000 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನೀರವ್ ಮೋದಿಯ ಆಸ್ತಿಯನ್ನೂ ಸರಕಾರ ವಶಪಡಿಸಿಕೊಳ್ಳುತ್ತಿದೆ.
11. ಮೋದಿ ಸರಕಾರವು ಆಡಳಿತಕ್ಕೆ ಬಂದು ವಿದ್ಯುತೀಕರಣ ವಂಚಿತವಾಗಿದ್ದ 18452 ಗ್ರಾಮಗಳಲ್ಲಿ ಪ್ರಧಾನಮಂತ್ರಿ ಗ್ರಾಮೀಣ ವಿದ್ಯುತೀಕರಣ ಯೋಜನೆಯ ಮೂಲಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದು ಇನ್ನು ಕೇವಲ 232 ಗ್ರಾಮಗಳು ಮಾತ್ರ ವಿದ್ಯುತೀಕರಣಕ್ಕೆ ಬಾಕಿ ಇದೆ. ಎಪ್ರಿಲ್ 2018 ಕೊನೆಯಾಗುವುದರೊಳಗೆ ದೇಶದ ಎಲ್ಲಾ ಗ್ರಾಮಗಳು ವಿದ್ಯುತ್ ಸಂಪರ್ಕವನ್ನು ಪಡೆಯಲಿವೆ. ಮೇ 2018 ರ ಒಳಗೆ ಈ ಗುರಿಯನ್ನು ತಲಪುವ ಯೋಜನೆಯಾಗಿದ್ದರೂ ಒಂದು ತಿಂಗಳು ಮೊದಲೇ ಸಂಪೂರ್ಣ ವಿದ್ಯುತೀಕರಣದ ಗುರಿಯು ಸಾಧಿತವಾಗಲಿದೆ.
12. ಕೊನೆಯದಾಗಿ ಡಿಮಾನೈಟೇಶನ್ನ ಯಶಸ್ಸನ್ನು ಪ್ರಶ್ನಿಸುವವರಿಗೆ ಉತ್ತರ. 23.22 ಲಕ್ಷ ಅಕೌಂಟ್ಗಳ ಮೂಲಕ Rs 3.68 ಲಕ್ಷ ಕೋಟಿ ರುಪಾಯಿಗಳನ್ನು ಬ್ಯಾಂಕ್ಗೆ ಹಾಕಲಾದ 17.73 ಲಕ್ಷ ಅನುಮಾನಾಸ್ಪದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇವರೆಲ್ಲರೂ ನೋಟ್ ಬ್ಯಾನ್ ಆದ ನಂತರ ರುಪಾಯಿ 2.5 ಲಕ್ಷ ದಿಂದ 25 ಲಕ್ಷಗಳವರೆಗೆ ನಿಷೇಧಿತ ನೋಟನ್ನು ಬ್ಯಾಂಕ್ನಲ್ಲಿ ಹಾಕಿದವರು ಜೊತೆಗೆ ಇವರಾರೂ ಇದುವರೆಗೆ ಆದಾಯ ತೆರಿಗೆ ಪಾವತಿ ಮಾಡಿದವರಲ್ಲ. ಸರಕಾರ ಇವರೆಲ್ಲರ ಮೇಲೆ ಕ್ರಮ ಕೈಗೊಳ್ಳುತ್ತಿದೆ.