ನವದೆಹಲಿ: ರಾಷ್ಟ್ರ ರಾಜಧಾನಿಯ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸುವ ಭರವಸೆಯೊಂದಿಗೆ ಭಾರತದ ಮೊತ್ತ ಮೊದಲ ಸ್ಮಾರ್ಟ್ ಮತ್ತು ಗ್ರೀನ್ ಹೈವೇ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.
ಬರೋಬ್ಬರಿ ರೂ.11,000 ಕೋಟಿ ವೆಚ್ಚದಲ್ಲಿ ಈ ಹೈವೇ ನಿರ್ಮಾಣಗೊಂಡಿದ್ದು, 135 ಕಿಲೋಮೀಟರ್ಗಳ 6 ಲೇನ್ಗಳ ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ ವೇ ಇದಾಗಿದೆ.
ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಪ್ರಸ್ತುತ ಇದರ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ತಲ್ಲೀನವಾಗಿದ್ದು, ಕಾಮಗಾರಿ ಪೂರ್ಣವಾಗುವ ಹಂತದಲ್ಲಿದೆ.
5 ಲಕ್ಷ ಟನ್ ಸಿಮೆಂಟ್ ಮತ್ತು 1ಲಕ್ಷ ಟನ್ ಸ್ಟೀಲ್ನ್ನು ಈ ಹೈವೇಗೆ ಬಳಸಲಾಗಿದ್ದು, ಇಂಟೆಲಿಜೆಂಟ್ ಹೈವೇ ಟ್ರಾಫಿಕ್ ಮ್ಯಾನೇಜ್ಮೆಂಟ್ ಸ್ಟಿಸ್ಟಮ್, ವೀಡಿಯೋ ಇನ್ಸಿಡೆಂಟ್ ಡಿಟೆಕ್ಷನ್ ಸಿಸ್ಟಮ್, ಕ್ಲೋಸ್ಡ್ ಟೋಲಿಂಗ್ ಸಿಸ್ಟಮ್ನ್ನು ಒಳಗೊಂಡಿದೆ.