ಲಕ್ನೋ: ವಿದ್ಯಾರ್ಥಿಗಳ ಮೇಲೆ ಬೇಕಾಬಿಟ್ಟಿಯಾಗಿ ಶುಲ್ಕ ವಿಧಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಸಲುವಾಗಿ ಕಾನೂನು ರೂಪಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ.
ಸ್ವಯಂ ಹಣಕಾಸಿನ ಸ್ವತಂತ್ರ ಶಾಲೆಗಳ(ಶುಲ್ಕ ನಿರ್ಬಂಧ) ಮಸೂದೆ 2018ರ ಕರಡು ರಚನೆಗೆ ಯೋಗಿ ನೇತೃತ್ವದ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ. ವಿದ್ಯಾರ್ಥಿಗಳ ಪೋಷಕರ ಮೇಲೆ ಶುಲ್ಕ ಹೊರೆಯನ್ನು ವಿಧಿಸುವ ಶಾಲೆಗಳ ವಿರುದ್ಧದ ಸಮರ ಇದಾಗಿದೆ.
ಪ್ರತಿವರ್ಷ ಶಾಲೆಗಳು ವಿದ್ಯಾರ್ಥಿಗಳಿಂದ ಅಡ್ಮಿಷನ್ ಫೀಸ್ ಪಡೆಯುವಂತಿಲ್ಲ. ಶಾಲೆಗೆ ದಾಖಲಾದ ವೇಳೆಯಲ್ಲಿ ಮತ್ತು 10ನೇ ತರಗತಿ ಮುಕ್ತಾಯವಾದ ಮೇಲೆ ಮಾತ್ರ ಇದನ್ನು ಪಡೆದುಕೊಳ್ಳಬೇಕು ಎಂಬ ನಿಯಮ ರೂಪಿಸಲಾಗಿದೆ.
ವೆಬ್ಸೈಟ್ಗಳಲ್ಲಿ ಶುಲ್ಕದ ವಿವರ ಅಪ್ಲೋಡ್ ಮಾಡಬೇಕು ಎಂದು ಸೂಚಿಸಲಾಗಿದ್ದು, ಶುಲ್ಕ ನಿರ್ಬಂಧ ಸಮಿತಿ ರಚನೆಗೆ ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.