ಮಾಸ್ಕೋ: ಚೀನಾದೊಂದಿಗಿನ ಸಂಬಂಧದಲ್ಲಿನ ಸಂಕೀರ್ಣತೆಯನ್ನು ಭಾರತ ಸರಿಯಾಗಿ ನಿರ್ವಹಣೆ ಮಾಡುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
7ನೇ ಮಾಸ್ಕೋ ಕಾನ್ಫರೆನ್ಸ್ ಆನ್ ಇಂಟರ್ನ್ಯಾಷನಲ್ ಸೆಕ್ಯೂರಿಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಡಲ ತೀರದ ಪ್ರಾದೇಶಿಕ ಬಿಕ್ಕಟ್ಟುಗಳು ಮರುಜೀವ ಪಡೆದುಕೊಳ್ಳುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
‘ಭಾರತ-ಚೀನಾ ಬಾಂಧವ್ಯದಲ್ಲಿನ ಸಂಕೀರ್ಣತೆಯನ್ನು ನಿಭಾಯಿಸುತ್ತಲೇ ಬಂದಿದ್ದೇವೆ. ಕಡಲತೀರದ ಬಿಕ್ಕಟ್ಟುಗಳು ನಿಜಕ್ಕೂ ತುಂಬಾ ಸಂಕೀರ್ಣವಾಗಿದೆ. ಇಂತಹ ವಿಷಯಗಳನ್ನು ಶಾಂತಿಯುತವಾಗಿ ನಿಭಾಯಿಸಬೇಕು ಎಂಬ ಅರಿವು ನಮಗಿದೆ’ ಎಂದಿದ್ದಾರೆ.
ಕಳೆದ ಕೆಲವು ದಶಕಗಳ ಬೆಳವಣಿಗೆ ಭಾರತ-ಪೆಸಿಫಿಕ್ ಪ್ರದೇಶವನ್ನು ಜಾಗತಿಕ ಆರ್ಥಿಕತೆಯ ಅತ್ಯಂತ ಕ್ರಿಯಾಶೀಲ ಎಂಜಿನ್ನನ್ನಾಗಿ ಪರಿವರ್ತಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.