ಮುಂಬಯಿ: ಜಪಾನ್ನನ್ನು ಹಿಂದಿಕ್ಕಿ ಭಾರತ ವಿಶ್ವದ ಎರಡನೇ ಅತೀದೊಡ್ಡ ಉಕ್ಕಿನ ಉತ್ಪಾದಕನಾಗಿ ಹೊರಹೊಮ್ಮಿದೆ. ಚೀನಾ ವಿಶ್ವದಲ್ಲೇ ಮೊದಲನೇ ಸ್ಥಾನದಲ್ಲಿದೆ.
ಸ್ಟೀಲ್ ಯೂಸರ್ಸ್ ಫೆಡರೇಶನ್ ಆಫ್ ಇಂಡಿಯಾದ ವರದಿಯನ್ವಯ, ಭಾರತದ ಉಕ್ಕಿನ (crude steel) ಉತ್ಪಾದನೆ ಶೇ.4.4ರಷ್ಟು ಏರಿಕೆಯಾಗಿದ್ದು, 2017ರ ಎಪ್ರಿಲ್ನಿಂದ 2018ರ ಫೆಬ್ರವರಿಯವರೆಗೆ 93.11ಮಿಲಿಯನ್ ಟನ್ ಉತ್ಪಾದನೆಯಾಗಿದೆ.
2015ರಲ್ಲಿ ಭಾರತ ಅಮೆರಿಕಾವನ್ನು ಹಿಂದಿಕ್ಕಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು, ಇದೀಗ ಜಪಾನನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಮೊದಲ ಸ್ಥಾನದಲ್ಲಿರುವ ಚೀನಾ ವಿಶ್ವದ ಶೇ.50ರಷ್ಟು ಕಚ್ಛಾ ಸ್ಟೀಲ್ನ್ನು ಉತ್ಪಾದನೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.