ನವದೆಹಲಿ: ರಾಜ್ಯಸಭಾ ಕಲಾಪ ನಿರಂತರ ಮುಂದೂಡಲ್ಪಡುವುದರಿಂದ ಕೋಪಗೊಂಡಿರುವ ಸಭಾಪತಿ ವೆಂಕಯ್ಯ ನಾಯ್ಡು ಅವರು, ನೀವು ದೇಶದ ತಾಳ್ಮೆಯನ್ನು ಪರೀಕ್ಷೆ ನಡೆಸುತ್ತಿದ್ದೀರಿ ಎಂದು ಸದಸ್ಯರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಬುಧವಾರ ಮಧ್ಯಾಹ್ನ 2ಗಂಟೆಗೆ ಸದಸ್ಯರ ಗದ್ದಲ ಗಲಾಟೆಗೆ ಕಲಾಪ ಮುಂದೂಡಲ್ಪಟ್ಟ ಹಿನ್ನಲೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.
‘ನಾವು ಯಾವುದೇ ಮಸೂದೆಯನ್ನು ಮಂಡನೆಗೊಳಿಸಿಲ್ಲ, ದೇಶ ಅಭಿವೃದ್ಧಿ ಬಯಸುತ್ತಿದೆ. ನೀವು ದೇಶದ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದೀರಿ. ಇಡೀ ದೇಶ ಸದನದೊಳಗೆ ನಡೆಯುತ್ತಿರುವ ವಿಷಯಗಳಿಂದ ಕ್ಷೋಭೆಗೊಳಗಾಗಿದೆ’ ಎಂದಿದ್ದಾರೆ.
ಇಂದು ನೂತನವಾಗಿ ಆಯ್ಕೆಯಾದ 12 ಸದಸ್ಯರು ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಪ್ರತಿಪಕ್ಷದ ಸದಸ್ಯರು ಸದನದೊಳಗೆ ಗದ್ದಲವೆಬ್ಬಿಸಿ ಬಾವಿಗಿಳಿದು ಘೋಷಣೆ ಕೂಗಲಾರಂಭಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.