News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

11 ಇಸ್ಲಾಮಿಕ್ ಸಂಘಟನೆಗಳನ್ನು ನಿಷೇಧಿಸಿದ ಶ್ರೀಲಂಕಾ

ಕೊಲಂಬೋ: ಉಗ್ರಗಾಮಿ ಚಟುವಟಿಕೆಗಳ ಜೊತೆ ಸಂಪರ್ಕ ಹೊಂದಿದ್ದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಮತ್ತು ಅಲ್-ಖೈದಾ ಸೇರಿದಂತೆ 11  ಇಸ್ಲಾಮಿಕ್ ಸಂಘಟನೆಗಳನ್ನು ಶ್ರೀಲಂಕಾ ನಿಷೇಧಿಸಿದೆ ಎಂದು ಮೂಲಗಳು ವರದಿ ಮಾಡಿದೆ.

ಏಪ್ರಿಲ್ 13, ಮಂಗಳವಾರ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಷ ಅವರು ವಿಶೇಷ ಗೆಜೆಟ್ ಅಧಿಸೂಚನೆಯ ಮೂಲಕ ಭಯೋತ್ಪಾದನೆ ತಡೆ (ತಾತ್ಕಾಲಿಕ) ನಿಬಂಧನೆಗಳ ಕಾಯ್ದೆಯಡಿ ಈ ಉಗ್ರವಾದಿ ಸಂಘಟನೆಗಳನ್ನ ನಿಷೇಧಿಸಿದ್ದಾರೆ.

ನಿಷೇಧಿಸಲ್ಪಟ್ಟ ಸಂಘಟನೆಗಳಲ್ಲಿ ಸ್ಥಳೀಯ ಮುಸ್ಲಿಂ ಗುಂಪು ಶ್ರೀಲಂಕಾ ಇಸ್ಲಾಮಿಕ್ ಸ್ಟುಡೆಂಟ್‌ ಮೂವ್‌ಮೆಂಟ್ ಕೂಡ ಸೇರಿದೆ.

ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವ ಅಥವಾ ವರ್ತಿಸಲು ಸಂಚು ಮಾಡಿದರೆ 10 ರಿಂದ 20 ವರ್ಷಗಳ  ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅದು ಅಧಿಸೂಚನೆ ತಿಳಿಸಿದೆ.

2019 ರ ಏಪ್ರಿಲ್ 21 ರಂದು ಈಸ್ಟರ್ ಸಂದರ್ಭದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರವಾದಿ ಸಂಘಟನೆಗಳನ್ನು ಕೂಡ ಶ್ರೀಲಂಕಾ ನಿಷೇಧಿಸಿದೆ.

ಸ್ಥಳೀಯ  ನ್ಯಾಷನಲ್ ಥೌಹೀತ್ ಜಮಾಥ್ (ಎನ್‌ಟಿಜೆ) ಮತ್ತು ಇತರ ಎರಡು ಸಂಘಟನೆಗಳು ನೇರವಾಗಿ ದಾಳಿಯಲ್ಲಿ ಭಾಗಿಯಾಗಿವೆ  ಎಂದು ಶಂಕಿಸಲಾಗಿದ್ದು,  2019 ರಲ್ಲಿ ಇದನ್ನು ನಿಷೇಧಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top