Election-MODI-LIVE-NEWS13

Oddoor-farms-NEW

DAS

Contact-TOP LAST BUT 1

BJP-1

Tuesday, June 11th, 2013   Category - ಕಾರ್ಕಳ

ಸಾಮಾಜಿಕ ಕಳಕಳಿಯ ಕಾರ್ಯ ಸಂಘಟನೆಗಳು ಮಾಡುತ್ತಿರುವುದು ಮಹತ್ವಪೂರ್ಣ: ಸುನಿಲ್ ಕುಮಾರ್

ಕಾರ್ಕಳ: ಸಾಮಾಜಿಕ ಕಳಕಳಿಯ ಕಾರ್ಯ ಸಂಘಟನೆಗಳು ಮಾಡುತ್ತಿರುವುದು ಮಹತ್ವಪೂರ್ಣ ವಿಚಾರ ಎಂದು ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದರು.

Karkala---Panchami

ಅವರು ಆನೆಕೆರೆ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಭಾನುವಾರ ನಡೆದ ಪಂಚಮಿ ಚಾರಿಟೇಬಲ್ ಟ್ರಸ್ಟ್ ದೊಂಡರಂಗಡಿ ಅವರ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ಹಾಗೂ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗೆ ಸರಕಾರದ ಜತೆ ದಾನಿಗಳು ಕೈ ಜೋಡಿಸಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಬಡ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ. ಪಂಚಮಿ ಚಾರಿಟೇಬಲ್ ಟ್ರಸ್ಟ್ ಶಿಕ್ಷಣದ ಜತೆ ಕ್ರೀಡೆ ಮತ್ತು ಆರೋಗ್ಯ ಮುಂತಾದ ಯೋಜನೆಗಳು ಬಡಜನರಿಗೆ ತಲುಪುವುದರಿಂದ ಜನರಿಗೆ ಉಪಯೋಗವಾಗಿದ್ದು ಈ ಕಾರ್ಯ ನಿರಂತರ ಸಾಗುವಂತಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ ಕೋಟ್ಯಾನ್, ಜಿ.ಪಂ.ಸದಸ್ಯ ಉದಯ ಕೋಟ್ಯಾನ್, ತಾ.ಪಂ.ಸದಸ್ಯೆ ಸುಗುಣ ಸುವರ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್, ನಿಟ್ಟೆ ಎನ್‌ಆರ್‌ಎಎಂ ಪಾಲಿಟೆಕ್ನಿಕ್ ಉಪನ್ಯಾಸಕ ವೆಂಕಟರಮಣ ಪ್ರಸಾದ್, ಆರೀಫ್ ಕಲ್ಲೊಟ್ಟೆ, ಗಾಯತ್ರಿ ಪ್ರಭು, ಅರುಣಮ್ಮ ಉಪಸ್ಥಿತರಿದ್ದರು.
ರಮಾನಂದ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕ ನಯನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಪಂಚಮಿ ವಂದಿಸಿದರು.

Leave a Reply

ನಿಮ್ಮ ಮತ

ಈ ಬಾರಿ ನನ್ನ ಮತ ದೇಶಕ್ಕಾಗಿ ?

View Results

Loading ... Loading ...

LANDLINKS

MCI-NEW

DVK

ShridEvi-Constructions

Adhikari

Chandrahas-Ullal-Advt

Garodi

Bhavish-Bazar

Reproducing any contents of this website, in whole or part, without prior written permission of the Publisher strictly prohibited.
Copyright :© 2013 News13. All Rights Reserved. Powered by Aksharodyama
Highslide for Wordpress Plugin